Sunday, December 15, 2024

ನೀತಿ ಕಥೆ

December 15, 2024 0
ನೀತಿ ಕಥೆ

 ಒಮ್ಮೆ ...

ದುರ್ಯೋಧನನಿಗೂ..
ಭೀಮನಿಗೂ ಜಗಳ ಶುರುವಾಗುತ್ತದೆ..

ಇಬ್ಬರೂ
ಒಬ್ಬರನ್ನೊಬ್ಬರು ದೂಷಿಸಿಕೊಳ್ಳುತ್ತಾರೆ...

ಮಾತಿನ ಮಧ್ಯದಲ್ಲಿ ದುರ್ಯೋಧನ...

"ನೀನು ವಿಧವೆಯ ಮಗ...
ಮುಂಡೆ ಮಗ "

ಎಂದು ಹೀಯಾಳಿಸುತ್ತಾನೆ..

ಅದು ನಿಜವಾಗಿತ್ತು..

ತಾಯಿ ಕುಂತಿದೇವಿ
ಪಾಂಡುವನ್ನು ಕಳೆದುಕೊಂಡು ವಿಧವೆಯಾಗಿದ್ದಳು..

ಭೀಮ
ನಿರುತ್ತರನಾಗಿ ತಾಯಿ ಬಳಿ ಬರುತ್ತಾನೆ..

"ಗಾಂಧಾರಿಯೂ ಕೂಡ ವಿಧವೆ..

ನೀನೂ ಸಹ
ದುರ್ಯೋಧನನ್ನು "ಮುಂಡೆ ಮಗ" ಎಂದು ಬಯ್ಯ ಬಹುದು.." ..

"ಧೃತರಾಷ್ಟ್ರ
ಬದುಕಿದ್ದಾನಲ್ಲ.. ಗಾಂಧಾರಿ ವಿಧವೆ ಹೇಗಾಗುತ್ತಾಳೆ...? "..

"ಹಾಗಲ್ಲ ಅದು..
ಮದುವೆಯ
ಪೂರ್ವದಲ್ಲಿ ಗಾಂಧಾರಿಯ ಜಾತಕದಲ್ಲಿ ದೋಷವಿತ್ತು..

ವಿಧವಾ ಯೋಗ
ಅವಳ ಜಾತಕದಲ್ಲಿತ್ತು..

ಹಾಗಾಗಿ..
ಗಾಂಧಾರಿಯ
ನೂರಾ ಒಂದು ಸಹೋದರರು..
ಗಾಂಧಾರಿಯನ್ನು
ಮೊದಲು ಒಂದು ಕುರಿಗೆ ಮದುವೆ ಮಾಡಿ..
ಕುರಿಯನ್ನು ಕಡಿದು ಸಾಯಿಸುತ್ತಾರೆ..

ಅಮೇಲೆ
ಧೃತರಾಷ್ಟ್ರನಿಗೆ ಮದುವೆ ಮಾಡಿದ್ದಾರೆ..." ...

::::::::::::::::::::::::::::::

ಭೀಮನಿಗೆ ಇಷ್ಟು ಸಾಕಾಗಿತ್ತು...

ನೇರವಾಗಿ ಧುರ್ಯೋಧನನ ಬಳಿ ಹೋಗಿ..

" ನೀನು..
ಕುರಿ
ಮುಂಡೆ ಮಗ....!!..." ...

ಎಂದು ಜರೆಯುತ್ತಾನೆ..

ಧುರ್ಯೋಧನ
ಕೆಂಡಾಮಂಡಲವಾಗುತ್ತಾನೆ...

ಧುರ್ಯೋಧನ
ವಸ್ತು ಸ್ಥಿತಿಯನ್ನು ವಿಚಾರಿಸುತ್ತಾನೆ...

ತನ್ನ

ಅವಮಾನಕ್ಕೆ ಕಾರಣರಾದ ...
ಗಾಂಧಾರ ದೇಶದ
ಸೋದರ ಮಾವಂದಿರನ್ನು ಜೈಲಿಗಟ್ಟುತ್ತಾನೆ....

::::::::::::::::::::::::::::::::::::::::::::::::::::::::::::::::::::::

ಶಕುನಿ....
ಗಾಂಧಾರ ದೇಶದ ರಾಜ ಕುವರ...

ಧೃತರಾಷ್ಟ್ರನ ಮಡದಿ ಗಾಂಧಾರಿಯ ಸಹೋದರ...

ದುರ್ಯೋಧನನಿಗೆ ಗಾಂಧಾರ ದೇಶದ ರಾಜರಿಂದ ಅವಮಾನವಾಗಿ..
ಅವರನ್ನು ಜೈಲಿಗೆ ಅಟ್ಟುತ್ತಾನೆ...

ಅವರು
ತನ್ನ ಸ್ವಂತ ಸೋದರ ಮಾವಂದಿರು...

ಅವಮಾನ..
ದುರಭಿಮಾನ..
ಅಧಿಕಾರದ ಮದ ಏನೆಲ್ಲ ಮಾಡಿಸಿಬಿಡುತ್ತದೆ.. !

ತನಗಾದ ಅವಮಾನಕ್ಕೆ
ಶಿಕ್ಷೆಯಾಗಿ...
ಜೈಲಿಗಟ್ಟಿದ ತನ್ನ ಸೋದರ ಮಾವಂದಿರಿಗೆ
ಒಬ್ಬನ
ಊಟ ಮಾತ್ರ ಕಳುಹಿಸುತ್ತಾನೆ...

ಗಾಂಧಾರ ದೇಶದ ರಾಜಕುವರರು ವಿಚಾರ ಮಾಡುತ್ತಾರೆ...

"ಒಬ್ಬನ ಊಟದಿಂದ
ನಾವು
ನೂರಾ ಒಂದು ಸಹೋದರರು ಬದುಕಲಾಗದು...

ನಮ್ಮಲ್ಲಿ
ಅತಿ ಹೆಚ್ಚು ಬುದ್ಧಿವಂತ ಬದುಕ ಬೇಕು...
ಹಾಗು ..
ನಮ್ಮನ್ನು ಈ ಸ್ಥಿತಿಗೆ ತಂದವನ
ವಂಶವನ್ನು ನಿರ್ನಾಮ ಮಾಡಬೇಕು..."

ಸರಿ...
ಬುದ್ಧಿವಂತನನ್ನು ಗುರುತಿಸುವುದು ಹೇಗೆ ?

"ಒಂದು
ಸಣ್ಣ ಶಂಖದ ಒಳಗೆ ದಾರ ತೂರಿಸ ಬೇಕು...."

ಎಲ್ಲರೂ
ಪ್ರಯತ್ನ ಪಟ್ಟರು.. ಆಗಲಿಲ್ಲ...

ಶಕುನಿ...
ಊಟದಲ್ಲಿ ಬಂದ ಸಕ್ಕರೆಯನ್ನು
ಶಂಖದ ಒಂದು ತುದಿಗೆ ಅಂಟಿಸಿದ..

ಇನ್ನೊಂದು
ಬದಿಯಿಂದ
ಸಣ್ಣ ದಾರವನ್ನು ಇರುವೆಗೆ ಕಟ್ಟಿ ಬಿಟ್ಟ..

ಇರುವೆ
ಸಕ್ಕರೆಯನ್ನು ಅರಸುತ್ತ
ಶಂಖದ ಮತ್ತೊಂದು ತುದಿ ತಲುಪಿತು ! ....

ಬುದ್ಧಿವಂತಿಕೆ
ಹೆಚ್ಚಾಗಿ ಸಾಮಾನ್ಯ ಜ್ಞಾನದಲ್ಲಿರುತ್ತದೆ...

ಸಹೋದರರೆಲ್ಲರೂ
ಶಕುನಿಯನ್ನು ಅಭಿನಂದಿಸಿದರು ..!

ಹಾಗು
ಊಟವನ್ನು ತ್ಯಾಗ ಮಾಡಿ ಪ್ರಾಣ ಬಿಟ್ಟರು...

ಸಾಯುವಾಗ ಒಂದು ಮಾತನ್ನು ಹೇಳಿದರು...

"ನೀನು
ನಮ್ಮೆಲ್ಲರ ಸೇಡನ್ನು ತೀರಿಸಬೇಕು..

ನಮ್ಮ
ಎಲುಬನ್ನು ನೀನು ಬಳಸಿಕೊ..
ಅವು ನಿನ್ನ ಮಾತನ್ನು ಕೇಳುತ್ತವೆ.."

ತನ್ನೆದುರಿಗೆ..
ತನ್ನ ನೂರು ಜನ ಸಹೋದರರು
ಉಪವಾಸದಿಂದ..
ನರಳಿ ನರಳಿ..
ಕಣ್ಣೆದುರಿಗೆ ಸತ್ತ ಚಿತ್ರವನ್ನು ಶಕುನಿ ಮರೆಯದಾದ...

ಒಳಗೊಳಗೆ..
ದ್ವೇಷದ ಕಿಚ್ಚು ಉರಿಯುತ್ತಿತ್ತು...

ಸಹೋದರ
ಎಲುಬಿನಿಂದ ಪಗಡೆಯ ದಾಳವನ್ನು ಮಾಡಿಟ್ಟುಕೊಂಡ...

"ತನ್ನ
ಸಹೋದರಿಯ ಮಗ..
ಅಳಿಯ
ದುರ್ಯೋಧನ
ತನ್ನ ಸಹೋದರರ ಸಾವಿಗೆ ಕಾರಣ " .....

ಕೌರವರನ್ನು
ತಾನೊಬ್ಬನೆ ಎದುರಿಸಿ ಗೆಲ್ಲಲು ಸಾಧ್ಯವಿಲ್ಲ...

ಶ್ರೀಕೃಷ್ಣನ
"ಅಭಯ ಹಸ್ತ " ರಕ್ಷಿತರು..
ಪಾಂಡವರಿಂದ ಈ ಕಾರ್ಯ ಸಾಧ್ಯ..." ....

ಶಕುನಿಯ
ಕುತಂತ್ರದ ಲೆಕ್ಕಾಚಾರ ತಪ್ಪಾಗಲಿಲ್ಲ...

ಕಪಟ
ಪಗಡೆಯಾಟದಲ್ಲಿ ಪಾಂಡವರನ್ನು ಸೋಲಿಸಿ...
ಕೌರವನನ್ನು ಗೆಲ್ಲಿಸಿ...
ಸತ್ಯವಂತ..
ಧರ್ಮ ನಡತೆಯ ಪಾಂಡವರಿಗೆ ವನವಾಸ ಮಾಡಿಸಿದ...

ಕುರುಕ್ಷೇತ್ರದ ಯುದ್ಧದ
ಮುನ್ನುಡಿಯನ್ನು..
ಶಕುನಿ..
ತನ್ನ ಕೈಯ್ಯಾರೆ ಬರೆದ....

ಕೌರವ ವಂಶವನ್ನು ನಿರ್ನಾಮ ಮಾಡಿದ...

::::::::::::::::::::::::::::::::::::::::::

ಒಂದು
ಕ್ಷುಲ್ಲಕ ಕಾರಣಕ್ಕಾಗಿ ...
ತನ್ನ
ಸೋದರ ಮಾವಂದಿರನ್ನು ಜೈಲಿಗಟ್ಟಿದ ದುರ್ಯೋಧನ
ತನ್ನ ..
ತನ್ನ ವಂಶದ ವಿನಾಶಕ್ಕೆ ಕಾರಣನಾದ...

ಪಾಂಡವರನ್ನು
ದ್ವೇಷಿಸುವ ಅಬ್ಬರದಲ್ಲಿ
ಶಕುನಿಯ ನಿಜ ಮುಖವನ್ನು ಗುರುತಿಸದಾದ...

:::::::::::::::::::::::::::::::::::::::::::::::::::::::::::::::::

ಪ್ರತಿಯೊಂದು
ವಿನಾಶದ ಹಿಂದೆ...
ಒಂದು ಸ್ವಯಂಕೃತ ಅಪರಾಧವಿದ್ದೇ ಇರುತ್ತದೆ...

ವಿನಾಶದ
ಮೂಲ..
ಆತ್ಮೀಯರ ಮುಖವಾಡದಲ್ಲಿ.. ..

ಹತ್ತಿರದವರಾಗಿ
ಶಕುನಿಯಾಗಿ...
ಕಿಚ್ಚು ಹತ್ತಿಸಿರುವುದು ಗೊತ್ತಾಗುವುದೇ ಇಲ್ಲ..

ಯಾವುದೇ
ಸಾಮ್ರಾಜ್ಯದ..
ದೇಶದ...

ಅತ್ಯುನ್ನತ
ವ್ಯಕ್ತಿಗಳ ಅವನತಿ...

ಸ್ವಂಯಕೃತ ತಪ್ಪುಗಳಿಂದ...

ಹತ್ತಿರದ
ಬಂಧುಗಳಿಂದಲೇ ಆಗುವುದು ಸೋಜಿಗದ ಸಂಗತಿ...

ಮಹಾಭಾರತವನ್ನು
ಒಂದು
ಕಾದಂಬರಿಯನ್ನಾಗಿ ಓದಿದರೂ...
ಪ್ರಸ್ತುತ
ಜಗತ್ತಿನಲ್ಲಿ ನಡೆಯುವ..
ಎಲ್ಲ ವಿದ್ಯಮಾನಗಳ ಪ್ರಶ್ನೆಗಳಿಗೆ ಉತ್ತರವಿದೆ...

ಹರೇ ಕೃಷ್ಣ 🙏🙏🙏

ಕೃಪೆ ವಾಟ್ಸಪ್

Thursday, October 27, 2022

🌹ಗಂಟಲಿನ ಕಫ ನಿವಾರಣೆಗೆ ಉಪಾಯಗಳು,☕🍵🍹🥣🥄

October 27, 2022 0
🌹ಗಂಟಲಿನ ಕಫ ನಿವಾರಣೆಗೆ ಉಪಾಯಗಳು,☕🍵🍹🥣🥄

 🌹ಕಫದ ಸಮಸ್ಯೆಯಿದ್ದರೆ ಬಿಸಿ ನೀರಲ್ಲಿ ಉಪ್ಪು ಹಾಕಿ ದಿನಕ್ಕೆ ಎರಡು-ಮೂರು ಬಾರಿ ಬಾಯಿ ಮುಕ್ಕಳಿಸಿ, ಇದರಿಂದ ಗಂಟಲಿನ ಕಫ ಕರಗುತ್ತದೆ.


🌹ನಿರಂತರ ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ. ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.

🌹ಕಫ ಕರಗಲು ಹಸಿ ಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3 - 4 ಬಾರಿ ಸೇವಿಸಿ. ಇದರಿಂದ ಕಫ ಕರಗುವುದು.

🌹ಅರಿಶಿನ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಕುಡಿಯುತ್ತಿರುವುದರಿಂದ ಕೂಡ ಕಫದ ಸಮಸ್ಯೆ ಶಮನವಾಗುತ್ತದೆ.

🌹ಹಸಿ ಶುಂಠಿಯನ್ನು ಕುದಿಸಿ ಅದಕ್ಕೆ ಚಕ್ಕೆ ಸೇರಿಸಿ ಕಷಾಯ ಮಾಡಿ ದಿನಕ್ಕೆ 2-3 ಬಾರಿ ಕುಡಿಯುವುದರಿಂದ ಸಹ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.

🌹ಜೇನುತುಪ್ಪಕ್ಕೆ ಕರಿಮೆಣಸಿನ ಪುಡಿ ಮಿಶ್ರ ಮಾಡಿ ದಿನಕ್ಕೆ 3-4 ಬಾರಿ ಸೇವಿಸುವುದರಿಂದ ಸಹ ಗಂಟಲ ಕಫ ಕರಗುತ್ತದೆ.

🌹ಹಸಿ ಕ್ಯಾರೆಟ್​ನ್ನು ಗಟ್ಟಿ ಜ್ಯೂಸ್‌ ಆಗಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಸಹ ಗಂಟಲಿನ ಕಫ ನಿವಾರಣೆಯಾಗುತ್ತದೆ.

🌹ಒಣ ಶುಂಠಿ, ಕರಿಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಸಹ ಕಫ ಸಮಸ್ಯೆಗೆ ಪರಿಹಾರ ಕಾಣಬಹುದು.

🌹ಬೆಳ್ಳುಳ್ಳಿ ಮತ್ತು ಜೇನು ಮಿಕ್ಸ್ ಮಾಡಿ ತಿನ್ನಿ
ಹೀಗೆ ಮಾಡುತ್ತಾ ಬಂದರೆ ಕೆಮ್ಮು ಕಡಿಮೆಯಾಗುವುದು. ಒಂದು ವೇಳೆ 3 ವಾರವಾದರೂ ಕೆಮ್ಮು ಕಡಿಮೆಯಾಗದಿದ್ದರೆ ವೈದ್ಯರ ಭೇಟಿ ಮಾಡಿ.

🌹ಮೂಗು ಕಟ್ಟಿದ್ದರೆ ಹಬೆ ತೆಗೆದುಕೊಳ್ಳಿ
ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಹಬೆ ತೆಗೆದುಕೊಂಡರೆ ಕೆಮ್ಮು ಶೀತ ಕಡಿಮೆಯಾಗುವುದು. ಹೀಗೆ ಹಬೆ ತೆಗೆದುಕೊಳ್ಳುವಾಗ 2 ಹನಿ ನೀಲಗಿರಿ ಎಣ್ಣೆ ಹಾಕಿದರೆ ಒಳ್ಳೆಯದು.

Saturday, October 30, 2021

ಪ್ರಮುಖ ಯುದ್ಧಗಳು

October 30, 2021 0
ಪ್ರಮುಖ ಯುದ್ಧಗಳು
🔺ಹೈಡಾಸ್ಪೆಸ್ ಕದನ
◾️ಕಾಲ: ಕ್ರಿ.ಪೂ 326
🔹ಯಾರ ನಡುವೆ - ಅಲೆಕ್ಸಾಂಡರ್ ಮತ್ತು ಪಂಜಾಬ್ ರಾಜ ಪೊರಸ್ ನಡುವೆ ನಡೆಯಿತು, ಇದರಲ್ಲಿ ಅಲೆಕ್ಸಾಂಡರ್ ಗೆದ್ದನು.

 🔺ಕಳಿಂಗ ಯುದ್ಧ
 ◾️ಸಮಯ: ಕ್ರಿ.ಪೂ 261
 🔹ಇವರ ಮಧ್ಯೆ - ಅಶೋಕ ಚಕ್ರವರ್ತಿ ಕಳಿಂಗವನ್ನು ಆಕ್ರಮಿಸಿದನು. ಯುದ್ಧದ ರಕ್ತಪಾತವನ್ನು ನೋಡಿದ ಅವರು ಹೋರಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

🔺 ಸಿಂಧ್ ಕದನ
◾️ಕಾಲ: 712 ಎ.ಡಿ.
🔹ಯಾರ ನಡುವೆ - ಮೊಹಮ್ಮದ್ ಖಾಸಿಮ್ ಅರಬ್ಬರ ಶಕ್ತಿಯನ್ನು ಸ್ಥಾಪಿಸಿದರು.

 🔺ತರೈನ್ ಯುದ್ಧಗಳು
 ◾️ಕಾಲ: 1191 ಎ.ಡಿ.
 🔹ಯಾರ ನಡುವೆ - ಮೊಹಮ್ಮದ್ ಗೌರಿ ಮತ್ತು ಪೃಥ್ವಿ ರಾಜ್ ಚೌಹಾನ್ ನಡುವೆ ನಡೆಯಿತು, ಇದರಲ್ಲಿ ಚೌಹಾನ್ ಗೆದ್ದರು.

 🔺2ನೇತರೈನ್‌ನ ಯುದ್ಧಗಳು
 ◾️ಕಾಲ: 1192 ಎ.ಡಿ.
 🔹ಯಾರ ನಡುವೆ - ಮೊಹಮ್ಮದ್ ಗೌರಿ ಮತ್ತು ಪೃಥ್ವಿ ರಾಜ್ ಚೌಹಾನ್ ನಡುವೆ ನಡೆಯಿತು, ಇದರಲ್ಲಿ ಮೊಹಮ್ಮದ್ ಗೌರಿ ಗೆದ್ದರು.

 🔺ಚಂದಾವರ್ ಕದನ
 ◾️ಸಮಯ: ಕ್ರಿ.ಶ 1194
 🔹ಯಾರ ನಡುವೆ - ಇದರಲ್ಲಿ ಮುಹಮ್ಮದ್ ಘೋರಿ ಕನ್ನೌಜ್ ರಾಜ ಜೈಚಂದ್ ಅವರನ್ನು ಸೋಲಿಸಿದರು.

 🔺ಮೊದಲ ಪಾಣಿಪತ್ ಕದನ
 🔹ಸಮಯ: ಕ್ರಿ.ಶ 1526
 ◾️ಅವರ ನಡುವೆ - ಮೊಘಲ್ ದೊರೆ ಬಾಬರ್ ಮತ್ತು ಇಬ್ರಾಹಿಂ ಲೋಧಿ ನಡುವೆ.

🔺 ಖಾನ್ವಾ ಕದನ
🔹ಸಮಯ: ಕ್ರಿ.ಶ 1527
◾️ಯಾರ ನಡುವೆ - ಬಾಬರ್ ರಾಣಾ ಸಂಗವನ್ನು ಸೋಲಿಸಿದರು

🔺ಘಾಗ್ರಾ ಕದನ
◾️ ಕಾಲ: ಕ್ರಿ.ಶ 1529
🔹ಯಾರ ನಡುವೆ - ಮಹಮ್ಮದ್ ಲೋದಿ ನಾಯಕತ್ವದಲ್ಲಿ ಬಾಬರ್ ಆಫ್ಘನ್ನರನ್ನು ಸೋಲಿಸಿದರು.

🔺ಚೌಸಲ್ ಕದನ
◾️ಸಮಯ: ಕ್ರಿ.ಶ 1539
◾️ಅವರಲ್ಲಿ - ಶೇರ್ ಶಾ ಸೂರಿ ಹುಮಾಯು ಅವರನ್ನು ಸೋಲಿಸಿದರು

🔺ಕನೌಜ್ ಅಥವಾ ಬಿಲ್ಗ್ರಾಮ್ ಕದನ
◾️ಸಮಯ: ಕ್ರಿ.ಶ 1540
🔹ಅವರ ನಡುವೆ - ಮತ್ತೊಮ್ಮೆ ಶೇರ್ ಷಾ ಸೂರಿ ಹುಮಾಯೂನ್ ಅವರನ್ನು ಸೋಲಿಸಿ ಭಾರತವನ್ನು ತೊರೆಯುವಂತೆ ಒತ್ತಾಯಿಸಿದರು.

 🔺ಎರಡನೇ ಪಾಣಿಪತ್ ಕದನ
 ◾️ಸಮಯ: ಕ್ರಿ.ಶ 1556
 🔹ಯಾರ ನಡುವೆ - ಅಕ್ಬರ್ ಮತ್ತು ಹೇಮು ನಡುವೆ.

 🔺ತಾಳಿಕೋಟಿ ಕದನ
 ◾️ಸಮಯ: ಕ್ರಿ.ಶ 1565
 🔹ಯಾರ ನಡುವೆ - ಈ ಯುದ್ಧವು ವಿಜಯನಗರ ಸಾಮ್ರಾಜ್ಯವನ್ನು ಕೊನೆಗೊಳಿಸಿತು.

 🔺ಹಲ್ಡಿಘಾಟಿ ಕದನ
 ◾️ಸಮಯ: ಕ್ರಿ.ಶ 1576
 🔹ಯಾರ ನಡುವೆ - ಅಕ್ಬರ್ ಮತ್ತು ರಾಣಾ ಪ್ರತಾಪ್ ನಡುವೆ, .

 🔺ಪ್ಲಾಸ್ಸಿ ಕದನ
 ◾️ಸಮಯ: ಕ್ರಿ.ಶ 1757
 🔹ಯಾರ ನಡುವೆ - ಬ್ರಿಟಿಷರು ಮತ್ತು ಸಿರಾಜ್-ಉದ್-ದೌಲಾ ನಡುವೆ, ಇದರಲ್ಲಿ ಬ್ರಿಟಿಷರು ಗೆದ್ದರು ಮತ್ತು ಭಾರತದಲ್ಲಿ ಬ್ರಿಟಿಷ್ ಆಡಳಿತದ ಅಡಿಪಾಯ.

 🔺ವಾಂಡಿವಾಶ್ ಕದನ
 ◾️ಸಮಯ: ಕ್ರಿ.ಶ 1760
 🔹ಅವರ ನಡುವೆ - ಬ್ರಿಟಿಷ್ ಮತ್ತು ಫ್ರೆಂಚ್ ನಡುವೆ, ಇದರಲ್ಲಿ ಫ್ರೆಂಚ್ ಸೋತರು.

 🔺ಮೂರನೇ ಪಾಣಿಪತ್ ಕದನ
 ◾️ಸಮಯ: ಕ್ರಿ.ಶ 1761
 🔹ಅವರ ನಡುವೆ - ಅಹ್ಮದ್ ಷಾ ಅಬ್ದಾಲಿ ಮತ್ತು ಮರಾಠರ ನಡುವೆ, ಇದರಲ್ಲಿ ಫ್ರೆಂಚ್ ಸೋಲಿಸಲ್ಪಟ್ಟರು.

🔺ಬಕ್ಸಾರ್ ಕದನ
◾️ಸಮಯ: ಕ್ರಿ.ಶ 1764
🔹ಅವರ ನಡುವೆ - ಬ್ರಿಟಿಷರು ಮತ್ತು ಸಿಯಾಜ್-ಉದ್-ದೌಲಾ ನಡುವೆ, ಮಿರ್ ಖಾಸಿಮ್ ಮತ್ತು ಶಾ ಆಲಂ II ರ ಸಂಯೋಜಿತ ಪಡೆಗಳು, ಇದರಲ್ಲಿ ಬ್ರಿಟಿಷರು ಗೆದ್ದರು.

 🔺ಮೊದಲ ಆಂಗ್ಲೋ ಮೈಸೂರು ಯುದ್ಧ
 ◾️ಸಮಯ: ಕ್ರಿ.ಶ 1767-69
 🔹ಪೂರ್ಣಗೊಂಡಿದ್ದು - ಮದ್ರಾಸ್ ಒಪ್ಪಂದ
 ಅವರ ನಡುವೆ - ಹೈದರ್ ಅಲಿ ಮತ್ತು ಬ್ರಿಟಿಷರ ನಡುವೆ, ಇದರಲ್ಲಿ ಬ್ರಿಟಿಷರನ್ನು ಸೋಲಿಸಲಾಯಿತು.

 🔺ಎರಡನೇ ಆಂಗ್ಲೋ ಮೈಸೂರು ಯುದ್ಧ
 ◾️ಕಾಲ: ಕ್ರಿ.ಶ 1780-84
 ಪೂರ್ಣಗೊಂಡಿದೆ - ಮಂಗಳೂರು ಒಪ್ಪಂದ
 🔹ಅವರ ನಡುವೆ - ಹೈದರ್ ಅಲಿ ಮತ್ತು ಬ್ರಿಟಿಷರ ನಡುವೆ, ಅದು ನಿರ್ಣಯಿಸದೆ ಉಳಿದಿದೆ.

🔺 ಮೂರನೇ ಆಂಗ್ಲೋ ಮೈಸೂರು ಯುದ್ಧ
▪️: ಕ್ರಿ.ಶ 1790-92
🔹ಪೂರ್ಣಗೊಂಡಿದೆ - ಶ್ರೀರಂಗಪಟ್ಟಣದ ಒಪ್ಪಂದ
 ಅವರ ನಡುವೆ - ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ನಡುವಿನ ಯುದ್ಧವು ಒಪ್ಪಂದದಿಂದ ಕೊನೆಗೊಂಡಿತು.

🔺4ನೇ ಆಂಗ್ಲೋ ಆಂಗ್ಲೋ ಮೈಸೂರು ಯುದ್ಧ
◾️ಕಾಲ: ಕ್ರಿ.ಶ 1797-99
🔹ಅವರ ನಡುವೆ - ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ನಡುವೆ, ಟಿಪ್ಪು ಕಳೆದು ಮೈಸೂರು ಅಧಿಕಾರ ಕುಸಿಯಿತು.

🔺ಚಿಲಿ ಯುದ್ಧ
▪️ಕಾಲ: ಕ್ರಿ.ಶ 1849
🔹ಅವರ ನಡುವೆ - ಈಸ್ಟ್ ಇಂಡಿಯಾ ಕಂಪನಿ ಮತ್ತು ಸಿಖ್ಖರ ನಡುವೆ ನಡೆಯಿತು, ಇದರಲ್ಲಿ ಸಿಖ್ಖರನ್ನು ಸೋಲಿಸಲಾಯಿತು.

🔺ಇಂಡಿಯಾ ಚೀನಾ ಬಾರ್ಡರ್ ವಾರ್
◾️ಕಾಲ: ಕ್ರಿ.ಶ 1962
🔹ಅವರ ನಡುವೆ - ಚೀನಾದ ಸೈನ್ಯವು ಭಾರತದ ಗಡಿ ಪ್ರದೇಶಗಳನ್ನು ಆಕ್ರಮಿಸಿತು. ಕೆಲವು ದಿನಗಳ ಯುದ್ಧದ ನಂತರ ಏಕಪಕ್ಷೀಯ ಕದನ ವಿರಾಮದ ಘೋಷಣೆ. ಭಾರತವು ತನ್ನ ಗಡಿಯ ಕೆಲವು ಭಾಗಗಳನ್ನು ಬಿಡಬೇಕಾಗಿತ್ತು.

🔺ಇಂಡೋ-ಪಾಕಿಸ್ತಾನಿ ಯುದ್ಧ
◾️ಸಮಯ: ಕ್ರಿ.ಶ 1965
🔹ಯಾರ ನಡುವೆ - ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ.
🇮🇳ಭಾರತ-- ಪಾಕಿಸ್ತಾನ್ ನ್ನು ಸೋಲಿಸಿತು 
 ■ಭಾರತ ಮತ್ತು ಪಾಕಿಸ್ತಾನ ನಡುವೆ ಸಿಮ್ಲಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.

🔺ಇಂಡೋ-ಪಾಕಿಸ್ತಾನಿ ಯುದ್ಧ
◾️ಸಮಯ: ಕ್ರಿ.ಶ 1971
🔹ಯಾರ ನಡುವೆ - 🇮🇳ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ. 
★ಪಾಕಿಸ್ತಾನ್ ಸೋಲು ಪರಿಣಾಮವಾಗಿ ಬಾಂಗ್ಲಾದೇಶ ಸ್ವತಂತ್ರ ದೇಶವಾಯಿತು.

🔺ಕಾರ್ಗಿಲ್ ಯುದ್ಧ
◾️ಸಮಯ: 1999 ಕ್ರಿ.ಶ.

Sunday, September 26, 2021

ಭಾರತದ ಮತ್ತು ಕರ್ನಾಟಕದ ಬೆಳೆಗಳು

September 26, 2021 0
ಭಾರತದ ಮತ್ತು ಕರ್ನಾಟಕದ ಬೆಳೆಗಳು
 ಭಾರತದ ಬೆಳೆಗಳು
================
☘ ಅತಿಹೆಚ್ಚು 'ಕಬ್ಬು' ಬೆಳೆಯುವ ರಾಜ್ಯ
- ಉತ್ತರ ಪ್ರದೇಶ
☘ ಅತಿ ಹೆಚ್ಚು 'ಭತ್ತ' ಬೆಳೆಯುವ ರಾಜ್ಯ
- ಪಶ್ಚಿಮ ಬಂಗಾಳ
☘ ಅತಿ ಹೆಚ್ಚು 'ಸೋಯಾಬೀನ್' ಬೆಳೆಯುವ ರಾಜ್ಯ
- ಮಧ್ಯ ಪ್ರದೇಶ
☘ ಅತಿಹೆಚ್ಚು 'ಈರುಳ್ಳಿ' ಬೆಳೆಯುವ ರಾಜ್ಯ
- ಮಹಾರಾಷ್ಟ್ರ 
☘ ಅತಿ ಹೆಚ್ಚು 'ರಬ್ಬರ್' ಬೆಳೆಯುವ ರಾಜ್ಯ
- ಕೇರಳ
☘ ಅತಿ ಹೆಚ್ಚು 'ಸೇಬು' ಬೆಳೆಯುವ ರಾಜ್ಯ 
- ಜಮ್ಮು ಮತ್ತು ಕಾಶ್ಮೀರ
☘ ಅತಿಹೆಚ್ಚು 'ಮೆಕ್ಕೆಜೋಳ' ಬೆಳೆಯುವ ರಾಜ್ಯ
- ಉತ್ತರ ಪ್ರದೇಶ
☘ ಅತಿಹೆಚ್ಚು 'ಕರಿಮೆಣಸು' ಬೆಳೆಯುವ ರಾಜ್ಯ
- ಕೇರಳ
☘ ಅತಿಹೆಚ್ಚು 'ಶುಂಠಿ' ಬೆಳೆಯುವ ರಾಜ್ಯ
- ಕೇರಳ
☘ ಅತಿಹೆಚ್ಚು 'ಅರಿಶಿನ' ಬೆಳೆಯುವ ರಾಜ್ಯ
- ತಮಿಳುನಾಡು
☘ ಅತಿ ಹೆಚ್ಚು 'ಮೆಣಸಿನಕಾಯಿ' ಬೆಳೆಯುವ ರಾಜ್ಯ 
- ಗುಂಟುರು ( ಆಂಧ್ರಪ್ರದೇಶ )
☘ ಅತಿಹೆಚ್ಚು 'ಮಾವು' ಬೆಳೆಯುವ ರಾಜ್ಯ
- ಮಹಾರಾಷ್ಟ್ರ
☘ ಅತಿಹೆಚ್ಚು 'ದ್ರಾಕ್ಷಿ' ಬೆಳೆಯುವ ರಾಜ್ಯ
- ಆಂಧ್ರಪ್ರದೇಶ
☘ ಅತಿ ಹೆಚ್ಚು 'ಈರುಳ್ಳಿ' ಬೆಳೆಯುವ ರಾಜ್ಯ
- ಮಹಾರಾಷ್ಟ್ರ
☘ ಅತಿಹೆಚ್ಚು 'ಆಲೂಗಡ್ಡೆ' ಬೆಳೆಯುವ ರಾಜ್ಯ
- ಉತ್ತರಪ್ರದೇಶ

ಕರ್ನಾಟಕದ ಬೆಳೆಗಳು
================
🍁 ಅತಿಹೆಚ್ಚು 'ಜೋಳ' ಬೆಳೆಯುವ ಜಿಲ್ಲೆ
- ಬಿಜಾಪುರ 
🍁 ಅತಿಹೆಚ್ಚು 'ತಂಬಾಕು' ಬೆಳೆಯುವ ಜಿಲ್ಲೆ
- ಮೈಸೂರು 
🍁 ಅತಿಹೆಚ್ಚು 'ಕಬ್ಬು' ಬೆಳೆಯುವ ಜಿಲ್ಲೆ
- ಬೆಳಗಾವಿ
🍁 ಅತಿಹೆಚ್ಚು 'ಭತ್ತ' ಬೆಳೆಯುವ ಜಿಲ್ಲೆ
- ರಾಯಚೂರು
🍁 ಅತಿಹೆಚ್ಚು 'ರಾಗಿ' ಬೆಳೆಯುವ ಜಿಲ್ಲೆ
- ತುಮಕೂರು
🍁 ಅತಿಹೆಚ್ಚು 'ತೊಗರಿ' ಬೆಳೆಯುವ ಜಿಲ್ಲೆ
- ಕಲಬುರಗಿ
🍁 ಅತಿಹೆಚ್ಚು 'ಗೋಧಿ' ಬೆಳೆಯುವ ಜಿಲ್ಲೆ
- ಬೆಳಗಾವಿ 
🍁 ಅತಿಹೆಚ್ಚು 'ಹತ್ತಿ' ಬೆಳೆಯುವ ಜಿಲ್ಲೆ
- ಹಾವೇರಿ 
🍁 ಅತಿಹೆಚ್ಚು 'ತೆಂಗು' ಬೆಳೆಯುವ ಜಿಲ್ಲೆ
- ತುಮಕೂರು
🍁 ಅತಿಹೆಚ್ಚು 'ದ್ರಾಕ್ಷಿ' ಬೆಳೆಯುವ ಜಿಲ್ಲೆ
- ವಿಜಯಪುರ
🍁 ಅತಿ ಹೆಚ್ಚು 'ಮೆಕ್ಕೆಜೋಳ' ಬೆಳೆಯುವ ಜಿಲ್ಲೆ
- ದಾವಣಗೆರೆ

Monday, May 31, 2021

ಪುರಾತನ ದೇವಾಲಯಗಳು

May 31, 2021 0
ಪುರಾತನ ದೇವಾಲಯಗಳು
🌷 ಗುಪ್ತರ ದೇವಾಲಯಗಳು 
        ( ನಾಗರ ಶೈಲಿ )
=====================
☘ ತಿಗಾವಾದ - ವಿಷ್ಣು ದೇವಾಲಯ
☘ ಭೂಮರಾ - ಶಿವಾಲಯ
☘ ನಾಚನಾ - ಶಿವಪಾರ್ವತಿ ದೇವಾಲಯ
☘ ದೇವಘಡ್ - ದಶಾವತಾರ ದೇವಾಲಯ

🌷 ಚೋಳರ ದೇವಾಲಯಗಳು
     ( ದ್ರಾವಿಡ ಶೈಲಿ )
====================
☘ ತ್ರಿಭುವನ - ಕಂಕರೇಶ್ವರ ದೇವಾಲಯ 
☘ ದಾರಾಸುರಂ - ಐರಾವತೇಶ್ವರ
☘ ಗಂಗೈಕೊಂಡ - ಬೃಹದೀಶ್ವರ 
☘ ತಂಜಾವೂರ್ - ರಾಜರಾಜೇಶ್ವರ 
☘ ನೆಲ್ಲೂರ್ - ಕೊರಂಗನಾಥ್

🌷 ಚಾಲುಕ್ಯರ ದೇವಾಲಯಗಳು 
           ( ವೇಸರ್ ಶೈಲಿ )
======================
☘ ಐಹೊಳೆ - ಲಾಡಖಾನ್ 
☘ ಬಾದಾಮಿ - ಮಹಾಕೂಟೇಶ್ವರ 
☘ ಪಟ್ಟದಕಲ್ಲು - ವಿರೂಪಾಕ್ಷ 
☘ ಮಹಾಕೂಟ - ಸಂಗಮೇಶ್ವರ

🌷 ಹೊಯ್ಸಳರ ದೇವಾಲಯಗಳು 
         ( ಹೊಯ್ಸಳ ಕಲೆ )
======================
☘ ಬೇಲೂರು - ಚೆನ್ನಕೇಶವ ದೇವಾಲಯ
☘ ಹಳೆಬೀಡು - ಹೊಯ್ಸಳೇಶ್ವರ 
☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ
☘ ಸೋಮನಾಥಪುರ - ಕೇಶವಾಲಯ

Sunday, May 23, 2021

ಯಾಸ್‌' ಚಂಡಮಾರುತದ ಬಗ್ಗೆ ನಮಗೆಷ್ಟು ಗೊತ್ತು?

May 23, 2021 0
ಯಾಸ್‌' ಚಂಡಮಾರುತದ ಬಗ್ಗೆ ನಮಗೆಷ್ಟು ಗೊತ್ತು?
ದೇಶದ ಪಶ್ಚಿಮ ಕರಾವಳಿ ಭಾಗದಲ್ಲಿ ತೌತೆ ಚಂಡಮಾರುತವು ತೀವ್ರ ಹಾನಿ ಉಂಟು ಮಾಡಿದ ಬೆನ್ನಲ್ಲೇ 'ಯಾಸ್‌' ಚಂಡಮಾರುತವು ಅಪ್ಪಳಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಈ ಚಂಡಮಾರುತಕ್ಕೆ 'ಯಾಸ್‌' ಎಂದು ಹೆಸರಿಡಲಾಗಿದೆ.
==============
👉 'ಯಾಸ್‌' ಚಂಡಮಾರುತದ ಬಗ್ಗೆ ನಾವು ತಿಳಿಯಬೇಕಾದ ಅಂಶಗಳು ಇಲ್ಲಿವೆ...
=============
- ಒಮನ್‌ ದೇಶದಲ್ಲಿ ಬೆಳೆಯುವ ಮಲ್ಲಿಗೆ ಗಿಡದ(ಯಾಸ್‌) ಹೆಸರನ್ನು ಈ ಚಂಡಮಾರುತಕ್ಕೆ ಇಡಲಾಗಿದೆ.
- ಬಂಗಾಳ ಕೊಲ್ಲಿಯಲ್ಲಿ ಆಗುವ ಬದಲಾವಣೆಗಳು ಈ ಚಂಡಮಾರುತವನ್ನು ಸೃಷ್ಟಿಸಲಿವೆ.
- ಮೇ 26ರಂದು ‘ಯಾಸ್‌’ ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದುಹೋಗಲಿದೆ.
- ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮೇ 23) ಸಭೆ ನಡೆಸಿದ್ದಾರೆ.
- ಚಂಡಮಾರುತವು ಸೃಷ್ಟಿಸಬಹುದಾದ ಅನಾಹುತಗಳನ್ನು ತಡೆಯಲು ರಾಷ್ಟ್ರೀಯ ವಿಪತ್ತು ಪಡೆ ಈಗಾಗಲೇ 65 ತಂಡಗಳನ್ನು ರಚಿಸಿದೆ.
- ಮೇ 26ರ ಬೆಳಿಗ್ಗೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದ ನೆರೆಯ ಪ್ರದೇಶಗಳು ಮತ್ತು ಬಾಂಗ್ಲಾದೇಶದ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗವು 155ರಿಂದ 165 ಕಿ.ಮೀ ಇರಲಿದೆ. ಇದು ವಾಯುಭಾರ ಕುಸಿತವನ್ನು ಉಂಟುಮಾಡಲಿದ್ದು, ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.
- ಚಂಡಮಾರುತಕ್ಕೆ ಒಳಗಾಗಲಿರುವ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲು ಅನುಕೂಲವಾಗುವಂತೆ, ನೌಕಾಪಡೆಯ ವಿಶಾಖಪಟ್ಟಣದಲ್ಲಿರುವ ವಾಯುನೆಲೆ ಐಎನ್‌ಎಸ್‌ ದೆಗಾ ಹಾಗೂ ಚೆನ್ನೈನ ಐಎನ್‌ಎಸ್‌ ರಜಲಿಯಲ್ಲಿ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
- ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯು ಸಹ ಕಾರ್ಯರೂಪಕ್ಕೆ ಬಂದಿದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಆರೋಗ್ಯ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡಲಾಗಿದೆ.
- ಪಶ್ಚಿಮ ಬಂಗಾಳ ಸರ್ಕಾರವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕಂಟ್ರೋಲ್‌ ರೂಮ್‌ಗಳನ್ನು ಸ್ಥಾಪಿಸಿದೆ. ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.
=======