ಹಾಸನ ಡಿಸಿ ರೋಹಿಣಿ ಸಿಂಧೂರಿ ಅವರಿಂದ ಮತ್ತೊಂದು ಉತ್ತಮ ಕಾರ್ಯ
ಹಾಸನ,ಜು,೧.: ತಮ್ಮ ಕಾರ್ಯದಕ್ಷತೆಯಿಂದ ಈಗಾಗಲೇ ಜನ ಮಾನಸದಲ್ಲಿ ಬೇರೂರಿರುವ ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಹಾಸನ ಜಿಲ್ಲೆಗೆ ಬಂದಾಗಿನಿಂದಲೂ ಒಂದಿಲ್ಲೊಂದು ಉತ್ತಮ ಕಾರ್ಯದಲ್ಲಿ ತಮ್ಮನ್ನ ತಾವು ತೊಡಿಗಿಸಿಕೊಂಡಿದ್ದಾರೆ. ಇದೀಗ ಡಿಸಿ ಮೇಡಂ ಅವರು ಜಿಲ್ಲೆಯ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಶಿಕ್ಷಕರ ಸಾಮರ್ಥ್ಯ ಪರೀಕ್ಷೆಗೆ ಮುಂದಾಗಿದ್ದಾರೆ.
ಶೈಕ್ಷಣಿಕವಾಗಿ ಜಿಲ್ಲೆ ಪ್ರಗತಿ ಹೊಂದಬೇಕು. ಆ ಮೂಲಕ ಫಲಿತಾಂಶ ರಾಜ್ಯದಲ್ಲಿ ಒಂದರಿಂದ ಮೂರನೇ ಸ್ಥಾನದಲ್ಲಿ ಇರಬೇಕೆಂಬ ಕಳಕಳಿಯಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಿಕ್ಷಣ ಇಲಾಖೆಯ ಡಿಡಿಪಿಐ ಹಾಗೂ ಬಿಇಒಗಳ ಸಭೆ ನಡೆಸಿ ಮಾರ್ಗಸೂಚಿಯನ್ನು ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಿಜ್ಞಾನ, ಗಣಿತ, ಸಮಾಜ ಪಠ್ಯಕ್ರಮ ಸಿಬಿಎಸ್ ಪಠ್ಯಕ್ರಮದ ಮಾದರಿಯಲ್ಲಿ ಬದಲಾವಣೆಯಾಗಿದ್ದು, ಹೊಸ ಪಠ್ಯಕ್ರಮ ಬೋಧಿಸಲು ಶಿಕ್ಷಕರನ್ನು ಸಜ್ಜುಗೊಳಿಸುವಲ್ಲಿ ಈ ಕ್ರಮ ಕೈಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜೂ.28 ರವರಗೆ ಪ್ರತಿ ಭಾನುವಾರ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿ ನಂತರ ಶಿಕ್ಷಕರಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ. ಜಿಲ್ಲೆಯ ಸರಕಾರಿ ಪ್ರೌಢಶಾಲೆಗಳಲ್ಲಿ ಗಣಿತ, ವಿಜ್ಞಾನ, ಸಮಾಜ ಬೋಧಿಸುವ 821 ಶಿಕ್ಷಕರಿದ್ದು, ಜೂಲೈ28ಕ್ಕೆ ಪರೀಕ್ಷೆಗೆ ಒಳಪಡಿಸುವ ಮೂಲಕ ಅವರ ಸಾಮರ್ಥ್ಯ ಪರೀಕ್ಷೆಗೆ ಮುಂದಾಗಿದ್ದಾರೆ.
ಇನ್ನು ರೋಹಿಣಿ ಅವರ ಶೈಕ್ಷಣಿಕ ಕಾಳಜಿಗೆ ಸಾರ್ವಜನಿಕರಿಂದ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.
ಕೃಪೆ.-ನೆಟ್
No comments:
Post a Comment