ಮೈಸೂರು, ಏಪ್ರಿಲ್ 11: ನಮ್ಮ ದೇಶದಲ್ಲೇ ಮೊದಲ ಬಾರಿಗೆ ಮತದಾನ ವ್ಯವಸ್ಥೆ ಜಾರಿಗೆ ತಂದಿದ್ದು ಸಾರ್ವತ್ರಿಕ ಚುನಾವಣೆ 1951ರಲ್ಲಿ ಎಂಬುದು ಮಾತು. ಆದರೆ ಅದಕ್ಕೂ ಮೊದಲು ಆರು ದಶಕಗಳ ಹಿಂದೆ ಮೈಸೂರಿನಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. ಅಂದು ನಡೆದ ಮತದಾನದಲ್ಲಿ ಮತದಾರರ ವಿವರ ಮಾತ್ರ ಗೌಪ್ಯವಾಗಿತ್ತು.
ಮೈಸೂರಿನ ಪುರಸಭೆಗೆ ಮೊದಲ ಬಾರಿಗೆ 1892ರಲ್ಲಿ ಮತದಾನ ನಡೆಯಿತು. ಆಗ ಅಲ್ಲಿ ಇದ್ದಿದ್ದು 250 ಜನರು ಮಾತ್ರ. ಮೈಸೂರಿನ ಮಹಾರಾಜರು, ಮಹಾರಾಜ ಕಾಲೇಜಿನ ಮುಖ್ಯಸ್ಥರು, ಮರಿಮಲ್ಲಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಅಧಿಕಾರಿಗಳು, ಬ್ರಿಟಿಷರು ನೇಮಿಸಿದ್ದ ಜಿಲ್ಲಾಧಿಕಾರಿ ಹಾಗೂ ಕೆಲ ಗಣ್ಯರಷ್ಟೇ ಮತದಾನದ ಹಕ್ಕನ್ನು ಹೊಂದಿದ್ದರು
ಅದಾಗಿ 20 ವರ್ಷಗಳ ಬಳಿಕ ಆಡಳಿತ ನಡೆಸುತ್ತಿದ್ದ ಮಹಾರಾಜ ಚಾಮರಾಜ ಒಡೆಯರ್ ಗೆ ಹೊಸ ಆಲೋಚನೆ ಬಂತು. ಅವರು ಪೌರಸಭೆಗೆ ತಾವೇ ನೇಮಕ ಮಾಡುವ ಬದಲು ಗಣ್ಯರ ಮೂಲಕ ಆಯ್ಕೆ ಮಾಡಿಸಿದರೆ ಹೇಗೆ ಎಂದು ಚಿಂತಿಸಿದರು ಅದೇ ಮತದಾನದ ಪದ್ಧತಿ ಆರಂಭವಾದ ಸಮಯ.
ಆಡಳಿತದ ಅನುಕೂಲಕ್ಕಾಗಿ ಮೈಸೂರು ನಗರವನ್ನು ದೇವರಾಜ, ಕೃಷ್ಣರಾಜ , ಚಾಮರಾಜ , ಲಷ್ಕರ್ , ಮಂಡಿ, ಪೋರ್ಟ್ ಮತ್ತು ನಜರಾಬಾದ್ ಎಂದು ಏಳು ವಿಭಾಗಗಳಾಗಿ ವಿಂಗಡಿಸಿ ಅದೇ ಸೆಪ್ಟೆಂಬರ್ ನಲ್ಲಿ ಮೊದಲಿಗೆ ಚುನಾವಣೆ ನಡೆಸಿದರು. ಹೀಗೊಂದು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ರೂಪುಗೊಂಡಿತು ಎಂಬುದು ಇತಿಹಾಸ.
ಮೈಸೂರಿನ ಪುರಸಭೆಗೆ ಮೊದಲ ಬಾರಿಗೆ 1892ರಲ್ಲಿ ಮತದಾನ ನಡೆಯಿತು. ಆಗ ಅಲ್ಲಿ ಇದ್ದಿದ್ದು 250 ಜನರು ಮಾತ್ರ. ಮೈಸೂರಿನ ಮಹಾರಾಜರು, ಮಹಾರಾಜ ಕಾಲೇಜಿನ ಮುಖ್ಯಸ್ಥರು, ಮರಿಮಲ್ಲಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಅಧಿಕಾರಿಗಳು, ಬ್ರಿಟಿಷರು ನೇಮಿಸಿದ್ದ ಜಿಲ್ಲಾಧಿಕಾರಿ ಹಾಗೂ ಕೆಲ ಗಣ್ಯರಷ್ಟೇ ಮತದಾನದ ಹಕ್ಕನ್ನು ಹೊಂದಿದ್ದರು
ಮೈಸೂರಿನ ರಾಜ್ಯ ಪತ್ರಗಳು ಹಾಗೂ ಕರ್ನಾಟಕ ಗೆಜಿಟೇರಿಯನ್ ಗಳಲ್ಲಿ ಇಂತಹ ಆಶ್ಚರ್ಯಕರ ಮಾಹಿತಿ ಲಭ್ಯವಿದೆ.
ಮೂಲಸೌಕರ್ಯ ಹಾಗೂ ನಾಗರಿಕ ಸೇವೆ ಕಲ್ಪಿಸಲು ಎಲ್ಲಾ ಸಂಸ್ಥಾನಗಳು ಪೌರ ಸಭೆಗಳನ್ನು ಸ್ಥಾಪಿಸಬೇಕೆಂದು ಬ್ರಿಟಿಷ್ ಆಡಳಿತ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿಯೇ ಮೈಸೂರಿನಲ್ಲಿ 1862ರ ಜುಲೈ 8ರಂದು ಪೌರಸಭೆ ಜಾರಿಗೆ ಬಂದಿತ್ತು.

No comments:
Post a Comment