ಪೂರ್ಣಕಾಲಿಕ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಇಷ್ಟು ವರ್ಷದ ಹಣಕಾಸು ಸಚಿವರು ಬಜೆಟ್ ದಾಖಲೆಗಳಿರುವ ಕಪ್ಪು, ಕಂದು ಬಣ್ಣಗಳ ಮೃದು ಲೆದರ್ ಹೊದಿಕೆ ಇರುವ ಬ್ರೀಫ್ಕೇಸ್ ಹಿಡಿದು ಸಂಸತ್ತಿಗೆ ಆಗಮಿಸುತ್ತಿದ್ದರು. ಆದರೆ, ನಿರ್ಮಲಾ ಸೀತಾರಾಮನ್ ಬ್ರೀಫ್ಕೇಸ್ ಸಂಸ್ಕೃತಿಗೆ ತೆರೆನೀಡಿದ್ದು ದಾಖಲೆಗಳನ್ನೆಲ್ಲ ಕೆಂಪು ಬಟ್ಟೆಯಲ್ಲಿ ಸುತ್ತಿಕೊಂಡು ಸಂಸತ್ತಿಗೆ ತೆಗೆದುಕೊಂಡು ಬಂದಿದ್ದಾರೆ.
ಕೆಂಪುಬಟ್ಟೆಯಲ್ಲಿ ಬಜೆಟ್ಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟು ಆ ಬಟ್ಟೆಯನ್ನು ನಾಲ್ಕು ಮಡಿಕೆ ಮಾಡಿ ರಿಬ್ಬನ್ನಿಂದ ಕಟ್ಟಲಾಗಿದೆ. ಅದರ ಮೇಲೆ ರಾಷ್ಟ್ರಲಾಂಛನವಾದ ನಾಲ್ಕು ಮುಖದ ಸಿಂಹದ ಚಿತ್ರವಿದ್ದು, ಆಕರ್ಷಣೀಯವಾಗಿದೆ.
ಬಜೆಟ್ ಎಂಬುದು ಮೂಲತಃ ಫ್ರೆಂಚ್ನ ಬಾಗಟ್ ಎಂಬ ಶಬ್ದದಿಂದ ಬಂದಿದೆ. ಅದರ ಅರ್ಥ ಲೆದರ್ ಚೀಲ ಎಂಬುದಾಗಿದೆ. ಹಾಗಾಗಿ ಬಜೆಟ್ ದಾಖಲೆಗಳನ್ನು ಲೆದರ್ ಬ್ರೀಫ್ಕೇಸ್ನಲ್ಲಿ ತರುವುದು ಬ್ರಿಟಿಷ್ ಕಾಲದಿಂದಲೂ ನಡೆದುಕೊಂಡು ಬಂದಿತ್ತು.
[18/05, 12:19] 🐅B̵̫̘͓̗̲͙̮̙͙̃̅̏̉͆̍🅾$҉$҉🐅:
🌹ಚೀಲದಿಂದ ಬಟ್ಟೆಯವರೆಗೆ…
👉ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾಗಿದ್ದು 1947ರಲ್ಲಿ. ಅಂದು ಆಯವ್ಯಯ ಮಂಡಿಸಿದ್ದ ಸರ್ ಎಂ.ಕೆ.ಷಣ್ಮುಖಂ ಚೆಟ್ಟಿ ಅವರು ದಾಖಲೆಗಳನ್ನು ಲೆದರ್ ಚೀಲದಲ್ಲಿ ಕೊಂಡೊಯ್ದಿದ್ದರು.
👉ಅದಾದ 10 ವರ್ಷಗಳ ಬಳಿಕ ಅಂದರೆ 1957ರಲ್ಲಿ ವಿತ್ತೀಯ ಸಚಿವರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರು ತಮ್ಮ ಮುಂಗಡ ಪತ್ರಗಳ ದಾಖಲೆಗಳನ್ನು ಫೈಲ್ ಬ್ಯಾಗ್ನಲ್ಲಿ ತೆಗೆದುಕೊಂಡು ಹೋಗಿದ್ದರು. ಹಾಗೇ ಜವಾಹರ್ಲಾಲು ಅವರು ಕಪ್ಪು ಬ್ರೀಫ್ಕೇಸ್ ಬಳಸಿದ್ದರು.
👉1991ರಲ್ಲಿ ಬಜೆಟ್ ಮಂಡನೆ ಮಾಡಿದ್ದ ಮನಮೋಹನ್ ಸಿಂಗ್ ತಮ್ಮ ಆಯವ್ಯಯ ದಾಖಲೆಗಳನ್ನು ಕಪ್ಪು ಬಣ್ಣದ ಚೀಲದಲ್ಲಿ ಕೊಂಡೊಯ್ದಿದ್ದರೆ,
👉 ಅವರು ಪ್ರಧಾನಿಯಾಗಿದ್ದಾಗ ವಿತ್ತೀಯ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಕೆಂಪು ಬಣ್ಣದ ಸೂಟ್ಕೇಸ್ ಹಿಡಿದು ಸಂಸತ್ತು ಪ್ರವೇಶಿಸಿದ್ದರು.
👉ಕಳೆದ ಎನ್ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ಜೇಟ್ಲಿ ಕಂದು ಬಣ್ಣದ ಬ್ರೀಫ್ಕೇಸ್ ಬಳಸಿದ್ದರೆ,
👉ಅವರ ಅನಾರೋಗ್ಯದ ನಿಮಿತ್ತ ಸರ್ಕಾರದ ಕೊನೇ ಮಧ್ಯಂತರ ಬಜೆಟ್ ಮಂಡಿಸಿದ್ದ ಪಿಯುಷ್ ಗೋಯೆಲ್ ಕೆಂಪು ಬಣ್ಣದ ಬ್ರೀಫ್ಕೇಸ್ ಹಿಡಿದಿದ್ದರು.
👉ಆದರೆ, ಒಂದು ಬಟ್ಟೆಯಲ್ಲಿ ಬಜೆಟ್ ದಾಖಲೆಗಳನ್ನು ದಾಖಲೆಗಳನ್ನು ಗಂಟುಕಟ್ಟಿ ಸಂಸತ್ತು ಪ್ರವೇಶಿಸಿದ್ದು ಇದೇ ಮೊದಲು ಎನ್ನಲಾಗಿದೆ
No comments:
Post a Comment