• ಜೋಕಾ ಅಲ್ಹಾರ್ತಿ(ಒಮನ್ ದೇಶ) — "ಸೆಬೆಸ್ಟಿಯನ್ ಬಾಡೀಸ್".
(2019ರ ಇಂಟರ್ ನ್ಯಾಷನಲ್ ಮ್ಯಾನ್ ಬೂಕರ್ ಪ್ರಶಸ್ತಿ)
• ಕೆನಡದ ಮಾರ್ಗರೆಟ್ ಆ್ಯಟ್ವುಡ್ ಮತ್ತು ಬ್ರಿಟನ್ನ ಬೆರ್ನಾರ್ಡೈನ್ ಎವರಿಸ್ಟೊ — ಆ್ಯಟ್ವುಡ್ರ ‘ದ ಟೆಸ್ಟಾಮೆಂಟ್’ ಮತ್ತು ಎವರಿಸ್ಟೊರ ‘ಗರ್ಲ್, ವುಮನ್, ಅದರ್’ ಕೃತಿಗಳು.
(2019ರ ಬೂಕರ್ ಪ್ರಶಸ್ತಿ)
• (ಮಲಯಾಳಂ ಸಾಹಿತಿ) ಅಕ್ಕಿತ್ತಮ್ ಅಚ್ಯುತನ್ ನಂಬೂದರಿ — 2019ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ.
• (ತೆಲುಗು ಕವಿ) ಕೆ.ಶಿವಾ ರೆಡ್ಡಿ — 'ಪಕ್ಕಾಕಿ ಒಟ್ಟಿಗಿಲೈಟ್' ಕವನ ಸಂಕಲನ.
(2019ರ ಸರಸ್ವತಿ ಸಮ್ಮಾನ್ ಪ್ರಶಸ್ತಿ.)
• 2019ರ ಪುಲಿಟ್ಜರ್ ಪ್ರಶಸ್ತಿ —
* ಫಾರೆಸ್ಟ್ ಗ್ಯಾಂಡರ್ ಅವರ ‘ಬಿ ವಿತ್’ ಕೃತಿ ಕವನ ವಿಭಾಗದಲ್ಲಿ,
* ಡೇವಿಡ್ ಬ್ಲೈಟ್ ಅವರ ‘ಫ್ರೆಡರಿಕ್ ಡಗ್ಲಾಸ್: ಪ್ರಾಫೆಟ್ ಆಫ್ ಫ್ರೀಡಂ’ಗೆ ಇತಿಹಾಸ ವಿಭಾಗದಲ್ಲಿ,
* ಜೆಫ್ರಿ ಸ್ಟಿವಾರ್ಟ್ ಅವರ ‘ದಿ ನ್ಯೂ ನಿಗ್ರೊ: ದಿ ಲೈಫ್ ಆಫ್ ಏಷಿಯನ್ ಲಾಕ್’ಗೆ ಜೀವನ ಚರಿತ್ರೆ ವಿಭಾಗದಲ್ಲಿ ಪ್ರಶಸ್ತಿ ದೊರಕಿವೆ.
• ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್ಒ) ಯ ಸಮೀಕ್ಷೆ ಪ್ರಕಾರ ವಿಶ್ವದ ಅತ್ಯಂತ ಸ್ವಚ್ಛ ಮಾಲಿನ್ಯಮುಕ್ತ ಗಾಳಿಯನ್ನು ಫಿನ್ಲ್ಯಾಂಡ್ ದೇಶ ಹೊಂದಿದೆ. (2019)
• ದೇಶಿ ನಿರ್ಮಿತ ದೂರವ್ಯಾಪ್ತಿಯ ಸಬ್ಸೋನಿಕ್ ಕ್ಷಿಪಣಿ ‘ನಿರ್ಭಯ್’ —
ಕ್ರಮಿಸುವ ಗರಿಷ್ಠ ದೂರ: 1000 ಕಿ.ಮೀ.
ತೂಕ: 1500 ಕೆ.ಜಿ.
ಉದ್ದ: 6 ಮೀಟರ್, ವ್ಯಾಸ: 0.52 ಮೀಟರ್
ರೆಕ್ಕೆಯ ಉದ್ದ: 2.7 ಮೀಟರ್
- 24 ವಿಧಗಳ ಯುದ್ಧಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ (290 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ), ಏಕಕಾಲದಲ್ಲಿ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯ.
• ಇಥಿಯೋಪಿಯಾ ದೇಶ (ಉತ್ತರ ಆಫ್ರಿಕಾದಲ್ಲಿದೆ) ದ ರಾಜಧಾನಿ : ಅಡ್ಡಿಸ್ ಅಬಾಬಾ.
— ಇತ್ತೀಚೆಗೆ ಇಲ್ಲಿನ 'ಓರೊಮೊ ಜನಾಂಗ'ದ ಜನಪ್ರಿಯ ಗಾಯಕ 'ಹಚ್ಚಲು ಹುಂಡೆಸ್ಸಾ'ನ ಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ, 239 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದು, ಇಡೀ ಇಥಿಯೋಪಿಯಾ ಜನಾಂಗೀಯ ದಳ್ಳುರಿಯಲ್ಲಿ ಬೇಯುತ್ತಿದೆ.
— ಇದೇ ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್(43 ವರ್ಷ) ಅವರಿಗೆ ಎರಿಟ್ರಿಯಾ ಜೊತೆಗೆ ದೇಶ ಸುದೀರ್ಘ ಕಾಲದಿಂದ ಹೊಂದಿದ್ದ ಗಡಿ ಬಿಕ್ಕಟ್ಟನ್ನು ಯಶಸ್ವಿಯಾಗಿ ಬಗೆಹರಿಸಿ ಶಾಂತಿ ನೆಲೆಸಲು ಕೈಗೊಂಡ ಕ್ರಮಗಳಿಗಾಗಿ 2019ನೇ ಸಾಲಿನ ‘ನೊಬೆಲ್ ಶಾಂತಿ ಪ್ರಶಸ್ತಿ’ ನೀಡಲಾಗಿತ್ತು.
No comments:
Post a Comment