Friday, May 14, 2021

ಆಧಾರ್,ಓಟರ್,ರೇಷನ್,ಪಾನ್,ಪಾಸ್ ಪೋರ್ಟ್,ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಕಳೆದುಹೋದರೆ ಹೀಗೆ ಮರಳಿಪಡೆಯಿರಿ

 ಈಗ ಹಲವು ರೀತಿಯ ಕಾರ್ಡ್ ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿವೆ. ಎಲ್ಲಿಗೇ ಹೋದರೂ ಐಡಿ ಕಾರ್ಡ್ ನಿಂದ ಹಿಡಿದು ಆಧಾರ್ ಕಾರ್ಡ್ ವರೆಗೆ ಯಾವುದೋ ಒಂದು ಸಮಯದಲ್ಲಿ ಯಾವುದಾದರೊಂದು ಕಾರ್ಡ್ ಬೇಕೇ ಬೇಕು. ಹಣ ಕಾಸು ವ್ಯವಹಾರಗಳಿಗೆ ಕ್ರೆಡಿಟ್,ಡೆಬಿಟ್ ಕಾರ್ಡ್ ಗಳು ಅನಿವಾರ್ಯವಾಗಿವೆ. ಯಾವಾಗ ಯಾವ ಕಾರ್ಡ್ ನ ಅಗತ್ಯ ಬೀಳುತ್ತದೋ ಹೇಳಲಾಗುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಡ್ ಗಳನ್ನು ಒಂದೇ ಕಡೆ ಇರಿಸಿ ಕೊಂಡಿರುತ್ತೇವೆ. ಅನಿರೀಕ್ಷಿತವಾಗಿ ಎಲ್ಲಾ ಕಾರ್ಡ್ ಗಳನ್ನೂ ಒಮ್ಮೆಲೇ ಕಳೆದುಕೊಂಡಾಗ, ಅವುಗಳನ್ನು ಮರಳಿ ಪಡೆಯುವುದು ಹೇಗೆಂದು ಟೆನ್ಷನ್ ಹೆಚ್ಚಾಗುತ್ತದೆ. ಇನ್ನು ಮುಂದೆ ನೀವು ಚಿಂತಿಸಲೇ ಬೇಕಾಗಿಲ್ಲ. ಸ್ವಲ್ಪ ಸಮಯ ತಗುಲುತ್ತದಾದರೂ ಆನ್ ಲೈನ್ ಮೂಲಕವೇ ಎಲ್ಲಾ ಕಾರ್ಡ್ ಗಳನ್ನು ಪಡೆಯುವ ಸೌಲಭ್ಯವಿದೆ.*


*ಆಧಾರ್ ಕಾರ್ಡ್ :*


*ಒಂದು ವೇಳೆ ನೀವು ಆಧಾರ್ ಕಾರ್ಡನ್ನು ಕಳೆದುಕೊಂಡರೆ, ಟೋಲ್ ಫ್ರೀ ನಂಬರ್ 18001801947 ಗೆ ಕರೆಮಾಡಿ ಪೂರ್ತಿ ವಿವರಗಳೊಂದಿಗೆ ದೂರು ಸಲ್ಲಿಸಬೇಕು. ಯಾವುದೇ ಖರ್ಚಿಲ್ಲದೆ ಹೊಸ ಕಾರ್ಡನ್ನು ಅಂಚೆ ಮೂಲಕ ಕಳಿಹಿಸುತ್ತಾರೆ    help@uidai.gov.in ವೆಬ್ ಸೈಟ್ ನಲ್ಲಿ ಪೂರ್ತಿ ವಿವರಗಳು ದೊರೆಯುತ್ತವೆ. ಯಾವುದೇ ಕಾರ್ಡ್ ಆಗಿರಲಿ ಅದನ್ನು ಸ್ಕ್ಯಾನ್ ಮಾಡಿಸಿ ನಿಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸಿ ಕಾಪಾಡಿಟ್ಟುಕೊಳ್ಳುವುದು ಉತ್ತಮ. ಮುಖ್ಯವಾಗಿ ಬೇಕಾಗುವ (ATM ಹೊರತು ಪಡಿಸಿ)ಕಾರ್ಡ್ ಗಳ ನ್ನು ಡೂಪ್ಲಿಕೇಟ್ ಮಾಡಿಸಿ ಇಟ್ಟುಕೊಂಡು,ಸಾಧ್ಯವಾದಷ್ಟು ಅವುಗಳನ್ನೇ ತೆಗೆದುಕೊಂಡು ಹೋಗಬೇಕು.*


*ಓಟರ್ ಐಡಿ ಕಾರ್ಡ್ :*


*ಓಟರ್ ಐಡಿ ಕಾರ್ಡ್ ನಮಗೆ ಹಲವು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಕೇವಲ ಮತ ಚಲಾಯಿಸಲು ಅಲ್ಲದೆ, ವಿಳಾಸ, ಹುಟ್ಟಿದ ದಿನಾಂಕ ದೃಡೀಕರಣ , ಕೆಲವೊಮ್ಮೆ ಐಡಿ ಕಾರ್ಡ್ ಆಗಿಯೂ ಉಪಯೋಗಕ್ಕೆ ಬರುತ್ತದೆ. ಒಂದು ವೇಳೆ ನಿಮ್ಮ ಓಟರ್ ಐಡಿ ಕಾರ್ಡ್ ಕಳೆದುಹೋದರೆ, ನಿಮ್ಮ ಪೋಲಿಂಗ್ ಬೂತ್ ನಂಬರ್,ಕಾರ್ಡ್ ನಂಬರ್ ನೊಂದಿಗೆ 10 ರೂಪಾಯಿಗಳ ಶುಲ್ಕವನ್ನು ಪಾವತಿಸಿ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು. ಕಾರ್ಡ್ ನಂಬರ್ ಆಧಾರವಾಗಿ ಸಲ್ಲಿಸಿ ತಹಶೀಲ್ದಾರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಕಾರ್ಡನ್ನು ಉಚಿತವಾಗಿ ಪಡೆಯಬಹುದು. ಓಟರ್ ಕಾರ್ಡ್ ಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು www.ceokarnataka.nic.in ನಿಂದ ಪಡೆಯಬಹುದು.*


*ರೇಷನ್ ಕಾರ್ಡ್ :*


*ಸರಕಾರ ಕೊಡುವ ಸಬ್ಸಿಡಿ ವಸ್ತುಗಳನ್ನು ಖರೀದಿಸುವುದಕ್ಕಲ್ಲದೆ, ಕೆಲವೊಮ್ಮೆ ವಿಳಾಸ ದೃಢೀಕರಣ ಪಡಿಸಲು ರೇಷನ್ ಕಾರ್ಡ್ ಉಪಯೋಗಕ್ಕೆ ಬರುತ್ತದೆ. ಒಂದು ವೇಳೆ ನೀವು ನಿಮ್ಮ ರೇಷನ್ ಕಾರ್ಡ್ ಕಳೆದುಹೋದಲ್ಲಿ www.ahara.kar.nic.in ವೆಬ್ ಸೈಟ್ ಗೆ ಲಾಗಿನ್ ಆಗಿ ಅಲ್ಲಿರುವ   user name : guest, password:guest123  ಮೂಲಕ, ರೇಷನ್ ಕಾರ್ಡ್ ನಂಬರನ್ನು ನಮೂದಿಸಿ ಜೆರಾಕ್ಸ್ ಪ್ರತಿಯನ್ನು ಪಡೆಯಬಹುದು. ನಂತರ ಸೇವಾ ಕೇಂದ್ರದಲ್ಲಿ  ಅರ್ಜಿ ಸಲ್ಲಿಸಿದರೆ, ಅದನ್ನು ತಾಹಶೀಲ್ದಾರ್ ಪರಿಶೀಲಿಸಿ ಅತೀ ಕಡಿಮೆ ಶುಲ್ಕ ಪಡೆದು ಅದೇ ನಂಬರಿನ ಕಾರ್ಡ್ ನೀಡುತ್ತಾರೆ.*


*ಪಾನ್ ಕಾರ್ಡ್ :*


*ಆರ್ಥಿಕ ವ್ಯವಹಾರಗಳಿಗೆ ಪಾನ್ ಕಾರ್ಡ್ ಬೇಕೇ ಬೇಕು. ಆದಾಯ ತೆರಿಗೆ ಇಲಾಖೆ ಕೊಡುವ ಪಾನ್ ( permanent account number) ಕಾರ್ಡ್ ಕಳೆದುಹೋದರೆ, ಅದಕ್ಕೆ ಸಂಬಂಧಪಟ್ಟ ಏಜೆನ್ಸಿಗಳ ಮುಖಾಂತರ ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಪಾನ್ ಕಾರ್ಡ್ ನ ಜೆರಾಕ್ಸ್ ಪ್ರತಿ, ಎರಡು ಕಲರ್ ಫೋಟೊಗಳು, ಗುರುತು,ವಿಳಾಸ ದೃಡೀಕರಣ ಪತ್ರಗಳನ್ನು ಲಗತ್ತಿಸಿ ಹೊಸ ಕಾರ್ಡ್ ಗಾಗಿ ರೂ 90 ಶುಲ್ಕವನ್ನು ಸಲ್ಲಿಸಿದರೆ ಮೂರು ವಾರಗಳ ಒಳಗೆ ಹೊಸ ಪಾನ್ ಕಾರ್ಡ್ ಬರುತ್ತದೆ. ಹೆಚ್ಚಿನ ಮಾಹಿತಿ  www.nsdl.pan  ನಲ್ಲಿ ದೊರೆಯುತ್ತದೆ.*


*ಡ್ರೈವಿಗ್ ಲೈಸೆನ್ಸ್ :*


*ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಅತ್ತಗತ್ಯ. ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದರೆ, ಹತ್ತಿರದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಅವರು ಕೊಡುವ ‘ ನಾನ್ ಟ್ರೇಸ್ಡ್’ ಪತ್ರ , ಡ್ರೈವಿಂಗ್ ಲೈಸೆನ್ಸ್ ಪ್ರತಿ ಯೊಂದಿಗೆ ಎಲ್ ಎಲ್ ಡಿ ಅರ್ಜಿಯನ್ನು ಆರ್ ಟಿ ಓ ಆಫೀಸಿನಲ್ಲಿ ಸಲ್ಲಿಸಬೇಕು. ಹಾಗೆಯೇ 10 ರೂ. ಬಾಂಡ್ ಪೇಪರ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಲು ಕಾರಣವನ್ನು ತಿಳಿಸಬೇಕು. ಒಂದು ತಿಂಗಳ ಒಳಗೆ ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಸಿಗುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ www.rto.kar.nic.in/ ನೋಡಿ*


*ಏ ಟಿ ಎಂ ಕಾರ್ಡ್ :*


*ಏಟಿಎಂ ಕಾರ್ಡ್ ಕಳೆದು ಹೋದರೆ ಅಥವಾ ಯಾರಾದರೂ ಕದ್ದರೆ, ಸಂಬಂಧಿಸಿದ ಬ್ಯಾಂಕ್ ಕಸ್ಟಮರ್ ಕೇರ್ ಗೆ ವಿಷಯ ತಿಳಿಸಿ ,ಕಾರ್ಡನ್ನು ಬ್ಲಾಕ್ ಮಾಡಿಸಬೇಕು. ನಂತರ ಬ್ಯಾಂಕ್ ನಲ್ಲಿ ಹೊಸ ಏ ಟಿ ಎಂ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬೇಕು. ನಿಗದಿತ ಶುಲ್ಕವನ್ನು ಪಡೆದು ಹೊಸ ಏ ಟಿ ಎಂ ಕಾರ್ಡ್ ನೀಡುತ್ತಾರೆ.*


*ಪಾಸ್ ಪೋರ್ಟ್ :*


*ಒಂದು ವೇಳೆ ಪಾಸ್ ಪೋರ್ಟ್ ಕಳೆದುಹೋದರೆ, ಸ್ಥಳಿಯ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು. ಅವರು ವಿಚಾರಣೆ ನಡೆಸಿ ಪಾಸ್ ಪೋರ್ಟ್ ಸಿಗದಿದ್ದಲ್ಲಿ ‘ನಾನ್ ಟ್ರೇಸ್ಡ್’ ಪತ್ರ ನೀಡುತ್ತಾರೆ. ನಂತರ ಪಾಸ್ ಪೋರ್ಟ್ ಆಫೀಸರ್, ಬೆಂಗಳೂರು ಹೆಸರಿಗೆ 1000ರೂ. ಡಿಡಿ ತೆಗೆದುಕೊಂಡು ಈ ಎರಡನ್ನು ಲಗತ್ತಿಸಿ ಅರ್ಜಿ ಹಾಕಬೇಕು. ಪ್ರಾದೇಶಿಕ ಅಧಿಕಾರಿಯಲ್ಲಿ ವಿಚಾರಿಸಿ ಕಾರ್ಯಾಲಯಕ್ಕೆ ಮಾಹಿತಿ ನೀಡುತ್ತಾರೆ. ವಿಚಾರಣೆ ಪೂರ್ತಿಗೊಂಡ ಮೂರು ತಿಂಗಳುಗಳ ನಂತರ ಡೂಪ್ಲಿಕೇಟ್ ಪಾಸ್ ಪೋರ್ಟ್ ನೀಡುತ್ತಾರೆ. ತತ್ಕಾಲ್ ಪಾಸ್ ಪೋರ್ಟ್ ಆದರೆ ನೇರವಾಗಿ ಸಂಬಂಧಪಟ್ಟ ಜಿಲ್ಲೆಯ ಎಸ್ ಪಿ ಯನ್ನು ಸಂಪರ್ಕಿಸಬೇಕು. ಹೆಚ್ಚಿನ ವಿವರಗಳನ್ನು* *www.passportindia.gov.in ಮೂಲಕ ಪಡೆದುಕೊಳ್ಳಬಹುದು.*

No comments:

Post a Comment